Monday 2 November 2009

ಅಮರ ಪ್ರೀತಿ ...



ಮಕರಂದವ ಹೀರಲು ಬಂದ ಭ್ರಮರಕೆ
ಹೂವಿನೊಡನೆ ಪ್ರೀತೆ ಮೂಡಿದೆ.
ಹೂವಿಗೆ ಆಯುಷ್ಯವಿಲ್ಲ ,ಭ್ರಮರಕ್ಕೆ ಆಹಾರವಿಲ್ಲ,
ಎರಡೂ ಜೊತೆಗೆ ಕೊನೆಯುಸಿರೆಳೆದಿವೆ.!!!

ಬೆಳಕನರಸುತ ಬಂದ ಮಿದತೆಯೊಂದಕೆ,
ಉರಿವ ಮೇಣದ ಬತ್ತಿಯೊಂದಿಗೆ ಪ್ರೆಮಾಂಕುರಿಸಿದೆ.
ಬತ್ತಿಗೆ ಆಯುಷ್ಯವಿಲ್ಲ, ರೆಕ್ಕೆ ಸುಟ್ಟ ಮಿದತೆಗೆ ತ್ರಾಣವಿಲ್ಲ,
ಎರಡೂ ಒಟ್ಟಿಗೆ ಪ್ರಾಣ ಬಿಟ್ಟಿವೆ.!!!

ಮರಣ ಕವಿತೆಯ ಗೀಚೋ ನನ್ನ ಲೇಖನಿಗೆ,
ಕವಿತೆಯ ಜೊತೆಗೆ ಪ್ರೀತಿ ಹುಟ್ಟಿದೆ
ಕವಿತೆಗೆ ಜೀವವಿಲ್ಲ, ಲೇಖನಿಯಲ್ಲಿ ಶಾಯಿಯಿಲ್ಲ,
ಎರಡೂ ಒಟ್ಟೊಟ್ಟಿಗೆ ಮ್ರುತ್ಯುವನ್ನಪ್ಪಿವೆ. !!!

Vinco. Fathimapur.

No comments:

Post a Comment