Monday 30 November 2009

ಒಮ್ಮೆಯಾದರೂ...


ಒಮ್ಮೆಯಾದರೂ ಬರಬಾರದೇ ಬಿರುಮಳೆಯಾಗಿ
ತೋಯಿಸೆ ನನ್ನ ಕನಸುಗಳ ಬಂಡಾಯದ ಕಾವ
ಕಾದ ನನ್ನೆದೆಯ ಹೊಲಕ್ಕೆ!!!

ಒಮ್ಮೆಯಾದರೂ ಅರಳಬಾರದೇ ನನ್ನಾಸೆಯ ಹೂವಾಗಿ

ಸಂಕುಚಿತ ಕಲ್ಪನೆಗಳ ಕಟ್ಟೆಯೊಡೆದು
ನನ್ನೊಲವಿನ ಹೂದೋಟದಲ್ಲಿ!!!

ಒಮ್ಮೆಯಾದರೂ ಮಿನುಗಬಾರದೇ -ತಾರೆಯಾಗಿ
ನಿರಾಶೆಯ ಮೋಡಗಳ ಮಧ್ಯದಿಂದ
ನನ್ನೆದೆಯ ಬಾಂದಳದಿ!!!

ಒಮ್ಮೆಯಾದರೂ ಇರಬಾರದೇ ನನ್ನ ಅತಿಥಿಯಾಗಿ

ನಿರೀಕ್ಷೆಗಳ ಹುಸಿಯಾಗಿಸದೇ
ನನ್ನಂತರಂಗದ ಮಹಲಿನೊಳು

ಒಮ್ಮೆಯಾದರೂ ಉಳಿಯಬಾರದೇ ನನ್ನ ನೆನಪಾಗಿ
ಮರೆವಿನ ಜೊಂಪಿನ ನಡುವಲ್ಲಿ
ನೋಡಲನುವಾಗುವಂತೆ
ಮತ್ತೆ ಮತ್ತೆ !!!

ವಿನೋದ್ ಕುಲಾಸೊ, ಕಪುಚಿನ್
(Published by "Snehajyothi" monthly July 2009)

Sunday 15 November 2009

ನೀನಾದರೂ......



ಬೀಳದೆ, ಒಡೆದ ಕನಸುಗಳಿಗೆ ತೇಪೆ ಹಾಕಿ,
ಮಾರಾತಕ್ಕಿಟ್ಟಿರುವೆ ಮನದ ಅಂಗಡಿಯಲಿ.
ಖರೀದಿಸುವವರಿಲ್ಲದೆ ಮುಗ್ಗುತಿವೆ,
ಕೊಳ್ಳಬಾರದೆ ನೀನಾದರೂ....

ಹೂಳದೇ ಹುಸಿಯಾಡುವ ಸಮಾಧಿಯ ಅಗೆದು,
ಸಾಯದ ಒಲವನು ತೆರೆದಿಟ್ಟಿರುವೆ
ನಂಬುತ್ತಿಲ್ಲ ಸತ್ಯವ ಯಾರೂ ಕೂಡಾ,
ನನಬಬಾರದೆ ನೀನಾದರೂ ....

ಅವ್ಯಕ್ತ ಭಾವಗಳು ವ್ಯಕ್ತಪಡಿಸಲಾಗದೆ
ಹೃದಯ-ಸಾಗರದಾಳ ಸೇರಿವೆ.
ಈಜಬಾರದವರೇ ಇಲ್ಲಿ ಎಲ್ಲ,
ಭಾವೋತ್ಖನನಕ್ಕೆ ನೆರವಾಗಬಾರದೇ ನೀನಾದರೂ..

ಬರೆಯದ ಪುಸ್ತಕವನ್ನು ಎರವಲು ತಂದು ,
ಓದಲು ಕುಳಿತಿರುವೆ ತನ್ಮಯದಿ
ಓದಲಾಗುತ್ತಿಲ್ಲ ಒಲವ ಮಬ್ಬಿನಲಿ,
ಅಕ್ಷರವಾಗಬಾರದೆ ನೀನಾದರೂ .....

ಬೀಳದ ಜಡಿ ಮಳೆಗೆ ಮೈಯೊಡ್ಡಿ
ಕಾಣದ ಕಾಮನ ಬಿಲ್ಲನು ಹುಡುಕುತಿರುವೆ
ತೋರಿಸಲಾರದ ಕುರುಡರೇ ಎಲ್ಲ,
ತೋರಿಸಿಬಿಡಬಾರದೇ ನೀನಾದರೂ...

"ನೆರಳೇ ಸಂಗ ತೊರೆದ ನಿರ್ಭಾಗಿ ನಾನು
ನನ್ನವಳನ್ನಾಗಿಸದ ನಿನ್ನ ಕಳೆದುಕೊಳ್ಳುವ ಭಯವಿಲ್ಲದಿದ್ದರೂ
ನನ್ನದೇ ಪ್ರಪಂಚದಲ್ಲಿ ನಾನು ಕಳೆದುಕೊಳ್ಳುವುದನ್ನು ತಪ್ಪಿಸಲು
ಬರಬಾರದೇ ಕೊನೆಯದಾಗಿ ನಿನಾದರೂ? "

Vinco, Capuchin.
(Published by 'Dootha' monthly, October 2009)





Thursday 5 November 2009

At Least You…

N.B.
(This is a literal translation & not in the form of poetry. Therefore in order to cherish its poetic beauty please read it in its original language i.e. Kannada as above.)

Undreamed broken dreams have I patched,
And have kept for sale, in the shop of my mind.
They are growing stale without the buyers,
Buy na at least U…

From the non cremated lying grave
I’ve dug the undying love.
No one trusts the life pity,
Prove na at least U…

Unexpressed suffering feelings,
Have sunk to the depth of heart’s Ocean.
All are poor helpers, cant give them freedom,
Got to mine them at least U…

I have got wet for the rain which didn’t,
Waiting for the unseen rainbow.
Blind are all can’t distinguish between colours,
Indicate the finger na at least U…

Unwritten book have I printed out,
And trying to read it with all possible means.
But remained unsuccessful in the ‘gloom of love’,
Read n tell na at least U…

“Even the shadow abandoned wretch I am,
There is no threat of losing U non possessed one.
But to stop me getting lost in my own world,
Come na finally at least U…”

Vinco., Fathimapur

ಸುತ್ಕೆಚೆ ವಾಟೆರ್...


ಸುತ್ಕೆಚ್ಯಾ ಪಾವ್ಲಾಂನಿ ಝರ ಫುಟೊನ
ನ್ಹಂಯ್ ವ್ಹಾಳೋನ್, ಕಾಟಾಂಚ್ಯಾ ಬಾಂದಾಂಕ ಫೋಡುನ
ವಾಟೆರ್ ಸಬಾರ್ ನ್ಹಂಯ್ಚ್ಯೊ ಸಂಗಮ್,
ದರ್ಯಾಚೆ ವೆಂಗೆಂತ ಘುಸೋನ್.
ಏಕಾ ಸಾಗೊರಾಂತ್ ಸಬಾರ್ ನ್ಹಾಂಯೊ!
ಅಗಣಿತ್ ನ್ಹಂಯಾಂ ಥಾವ್ನ್ ಏಕ್ ಸಾಗೊರ್!
ಏಕಾಭಿತರ್ ಏಕ್ ನಾಸ್ತಾಂ,
ಸುಟ್ಕೆಚಿ ಪರಮ್ ಘಡಿ.

ಸುಟ್ಕೆಚ್ಯಾ ಮೆಟಾಂನಿಂ ಪ್ಹುಲಾಂಚೋ ಪರ್ಮಳ,
ಪಾಳಾಂನಿಂ ಫುಲಾಚೋ ಸ್ವಾದ್ ನಿರ್ದಾರ್ ಜಾವ್ನ್,.
ಏಕ್ ಮೂಟ್ ಮಾತಿಯೆಂತ್ ಲಿಪ್ಲ್ಯಾಂತ್ ಸಬಾರ್ ಸ್ವಾದ್ !
ಏಕಚ್ಚ ಮೂಟ್ ಮಾತಿಯೆಂತ್ ವಿಬಿನ್ ರೂಚ್!
ಫುಲ್ ಆನಿ ಪರ್ಮಳಾಚಿಂ ನಾಂವಾಂ ಮಿಸ್ಳಾತಾನಾ!
ಸುಟ್ಕೆಚಿ ಪರಮ್ ಘಡಿ !!!

ಸುಟ್ಕೆಚೆ ಪೆಚಾಡ್ನೆಂತ್ ಬಿಂ ಏಕ್ ಕಿರ್ಲೊನ್,
ಸರ್ಲಾಂಚೆಂ ಬಂದನ್ ತುಟಾಂವ್ಕ ಸಕ್ತಾನಾ,
ನವ್ಯಾ ಜಿವಾಚೋ ಜಲ್ಮ್...
ಏಕಾ ಬಿಯಾಂತ್ ಸಬಾರ್ ರುಕಾಂ!
ಎಕಾ ರುಕಾಂತ್ ಅಗಣಿತ್ ಬಿಯಾಂ!
ಬಿಂ ರೂಕ್ ಜಾವ್ನ್ ವಾಡ್ತಾನಾ,
ಸುಟ್ಕೆಚೋ ಭ್ಹರ್ವಸೊ!!!

ರಚ್ನೆಚಿಂ ಪಾವ್ಲಾಂ ಸುಟ್ಕೆಚೆ ವಾಟೆರ್,
ಸುಟ್ಕೆಚ್ಯಾ ಝುಜಾಕ್ ಅರ್ತ್ ಸಬಾರ್ !!!

ವಿನ್ಕೋ., ಫಾತಿಮಾಪುರ್
(Secured First place in the Rakno Literacy competion-2008)

Tuesday 3 November 2009

ಆಸಾಯ್ ತಶೆಂ ತುಂ ಯೇ...


ಭ್ರಮರಾನ್ ಪುಸ್ಪುಸೊನ್ ಬೊಂಗ್ಯಾಕ್ ಪುಲಾಯ್ಲೊ ಘುಟ್ ತುಕಾ ಸಾಂಗ್ತಾಂ,
'ಪುಲಾಕ್ ಸೊಭಾಯೆಕ್ ಫರಕ್ ನಾಂ
ಆಸಾಯ್ ತಶೆಂ ಭಾಯ್ರ್ ಸರ್ನ್ ಯೇ,
ಉಶೀರ್ ಕಿತ್ಯಾಕ್ ನೆಟಾವ್ಣೆರ ಆನಾ,
ಸೋಭಾಯೇಚಿ ಸಿನೊಲ್ ಮ್ಹಾಕಾ ತುಂ ಮಾತ್ರ್,
ಸೊಭಿತ್ ಸಂಸ್ರಾಂತ್ ಹಾಂವ್ ಕುರ್ಡೊ ಪಾತ್ರ್.

ಪಿರ್ಲುಕ್ ಕೆಳಯ್ಲ್ಯಾ ವೊಂಟಾಂಚೊ ಕುಚ್ಕುಚೊ ತುಕಾ ಸಾಂಗ್ತಾಂ
'ಪಿರ್ಲುಕೆಕ್ ಆನಿ ನಾದಾಕ್ ವೆತ್ಯಾಸ್ ನಾಂ
ತುಜ್ಯಾ ಉಚ್ವಾಸಾಚ್ಯಾ ನಾದಾನ್ ಭರೊನ್ ಯೇ
ಧಲ್ತಾತ್ ಮ್ಹಜಿಂ ಕಾಳ್ಜಾ ಕಾನಾಂ.
ಸಂಗೀತ್ ಮ್ಹಣ ಆಸ್ಲ್ಯಾರ್ ಮ್ಹಾಕಾ ತುಂ ಮಾತ್ರ್ ,
ಸಂಗೀತಾಚ್ಯಾ ಸಾಗೊರಾಂತ್ ಮ್ಹಾಕಾ ಕೆಪ್ಪ್ಯಾಚೊ ಪಾತ್ರ್.

ಪಾಯಾಂಚಿ ಧುಳ್ ಪುಸುನ್ ವೇಳ್ ವಿಬಾಡ್ನಾಕಾ,
ಆಸಾಯ್ ತಶೆಂ ಮೆಟಾಂ ಉಡೊನ್,
ಕಾಲ್ಜಾ ಪಾನಾರ್ ಮ್ಹೊರ ಮಾರ್.
ಘಾಮ್ ನಾಂವ್ಕ್ ಅಮ್ಚೊರ್ನಾಕಾ,
ಧಾವುನ್ ಯೇ ಘಾಮಾಂತಚ್ಚ್ ನಾವ್ನ್,
ಕರುಂಕ್ ಅಪುಟ್ ಮೊಗಾಚೊ ಬೆಂಜಾರ್

ಆಹ್ವಾನ ಲಿಖ್ಲಾಂ ತರೀ ಭುಲಲ್ಲ್ಯಾ ಮೊಡಾನಿ,
ಪಾವ್ಸಾಕ್ ಹಾವೆಂ ರಾವೊಂಕ್ ಸಾಂಗ್ಲಾಂ.
ಆಸನ್ ರಚುನ್ ಗೋಪಾಂತ್ ಧರ್ಯಾ ವೆಳೆರಿ,
ತಂಯ್ಸರ್ ವೆಳಾಕ್ ರಾಕೊಂಕ್ ಸಾಂಗ್ಲಾಂ.
ಮೊಳ್ಬಾ ಫಣ್ಟಿ ರಾಕೊನ್ ಆಸ್ತೆಲಿ,
ಕಾಳ್ಕಾಕ್ ವೆಂಗುನ್ ತುಂ ಎಂವ್ಚೆ ಪರ್ಯಾಂತ್

ನಾತಲ್ಲ್ಯಾ ತುಜೆಕಾತಿರ್ ರಾಕ್ಚೆಂ ಮ್ಹಜೆಂ ಪಿಶೆನ್ಪಣ ತಶೆಂ ಭೊಗ್ತಾ ತರೀ
ಹಾಂವ್ ಆಶಾವಾದಿ!!!!
Vinco, ಕಪುಚಿನ್

Secured first place in the "Sevak Golden Jubilee Literacy competitions"...

Monday 2 November 2009

ಅಮರ ಪ್ರೀತಿ ...



ಮಕರಂದವ ಹೀರಲು ಬಂದ ಭ್ರಮರಕೆ
ಹೂವಿನೊಡನೆ ಪ್ರೀತೆ ಮೂಡಿದೆ.
ಹೂವಿಗೆ ಆಯುಷ್ಯವಿಲ್ಲ ,ಭ್ರಮರಕ್ಕೆ ಆಹಾರವಿಲ್ಲ,
ಎರಡೂ ಜೊತೆಗೆ ಕೊನೆಯುಸಿರೆಳೆದಿವೆ.!!!

ಬೆಳಕನರಸುತ ಬಂದ ಮಿದತೆಯೊಂದಕೆ,
ಉರಿವ ಮೇಣದ ಬತ್ತಿಯೊಂದಿಗೆ ಪ್ರೆಮಾಂಕುರಿಸಿದೆ.
ಬತ್ತಿಗೆ ಆಯುಷ್ಯವಿಲ್ಲ, ರೆಕ್ಕೆ ಸುಟ್ಟ ಮಿದತೆಗೆ ತ್ರಾಣವಿಲ್ಲ,
ಎರಡೂ ಒಟ್ಟಿಗೆ ಪ್ರಾಣ ಬಿಟ್ಟಿವೆ.!!!

ಮರಣ ಕವಿತೆಯ ಗೀಚೋ ನನ್ನ ಲೇಖನಿಗೆ,
ಕವಿತೆಯ ಜೊತೆಗೆ ಪ್ರೀತಿ ಹುಟ್ಟಿದೆ
ಕವಿತೆಗೆ ಜೀವವಿಲ್ಲ, ಲೇಖನಿಯಲ್ಲಿ ಶಾಯಿಯಿಲ್ಲ,
ಎರಡೂ ಒಟ್ಟೊಟ್ಟಿಗೆ ಮ್ರುತ್ಯುವನ್ನಪ್ಪಿವೆ. !!!

Vinco. Fathimapur.

Friday 30 October 2009

ಪ್ರೀತಿಯು ಕಾಯುತಿದೆ...


ಹರಳುಗಟ್ಟಿ ಕಾಯುತಿದೆ ಪ್ರೀತಿಯು
ಹೃದಯ-ಸಾಗರದೊಳಗೆ,
ಮರಳು ಖಾಲಿಯಾಗುವವರೆಗೆ ಕಾವುದದು
ಕಾಲದ ಜಾಡಿಯೊಳಗೆ...

ಯಾರದೋ ಪ್ರೀತಿಗಾಗಿ ಜೀಕುವ ಜೀವವಾಗಿ
ಯಾವುದೋ ಜೀವದಲಿ ಹೂತ ಭಾವವಾಗಿ
ಜೀವದೊಳಗಿನ ಜೀವವಾಗುವ ಜಿಜ್ಞಾಸೆಯಾಗಿ
ಪ್ರೀತಿಯು ಕಾಯುತಿದೆ...

ಬಾಳ ಮೂಸೆಯಲಿ ಮಾಗಿ-ಮಧುವಾಗಿ
ಪ್ರೀತಿಸುತ್ತಲೇ ಪ್ರೀತಿಗಾಗಿ ಸತ್ತ ಮೊತ್ತವಾಗಿ
ಅವ್ಯಕ್ತವಾಗಿಯೇ ಉಳಿದ ಅನಾಥ ಪ್ರೀತಿಯಾಗಿ
ಪ್ರೀತಿಯು ಕಾಯುತಿದೆ...

ಬಾಲಿಸುತ್ತಾ ಪ್ರೀತಿಯ-ಗೋಡೆ ಏರಿಸಿ
ಜೀವ- ಜೀವಗಳ ನಡುವೆ ಪ್ರೀತಿ ಜಾಲವ ಹೆಣೆದು,
ಪ್ರೀತಿಯಾಟವಾಡುವ
ಪ್ರೀತಿಯು ಕಾಯುತಿದೆ...

Vinco., Fathimapura