Friday 30 October 2009

ಪ್ರೀತಿಯು ಕಾಯುತಿದೆ...


ಹರಳುಗಟ್ಟಿ ಕಾಯುತಿದೆ ಪ್ರೀತಿಯು
ಹೃದಯ-ಸಾಗರದೊಳಗೆ,
ಮರಳು ಖಾಲಿಯಾಗುವವರೆಗೆ ಕಾವುದದು
ಕಾಲದ ಜಾಡಿಯೊಳಗೆ...

ಯಾರದೋ ಪ್ರೀತಿಗಾಗಿ ಜೀಕುವ ಜೀವವಾಗಿ
ಯಾವುದೋ ಜೀವದಲಿ ಹೂತ ಭಾವವಾಗಿ
ಜೀವದೊಳಗಿನ ಜೀವವಾಗುವ ಜಿಜ್ಞಾಸೆಯಾಗಿ
ಪ್ರೀತಿಯು ಕಾಯುತಿದೆ...

ಬಾಳ ಮೂಸೆಯಲಿ ಮಾಗಿ-ಮಧುವಾಗಿ
ಪ್ರೀತಿಸುತ್ತಲೇ ಪ್ರೀತಿಗಾಗಿ ಸತ್ತ ಮೊತ್ತವಾಗಿ
ಅವ್ಯಕ್ತವಾಗಿಯೇ ಉಳಿದ ಅನಾಥ ಪ್ರೀತಿಯಾಗಿ
ಪ್ರೀತಿಯು ಕಾಯುತಿದೆ...

ಬಾಲಿಸುತ್ತಾ ಪ್ರೀತಿಯ-ಗೋಡೆ ಏರಿಸಿ
ಜೀವ- ಜೀವಗಳ ನಡುವೆ ಪ್ರೀತಿ ಜಾಲವ ಹೆಣೆದು,
ಪ್ರೀತಿಯಾಟವಾಡುವ
ಪ್ರೀತಿಯು ಕಾಯುತಿದೆ...

Vinco., Fathimapura

ಶಾಬಿತಾಯ್ ...

ಮೋಗ್ ಉಲಾಯ್ತಾನಾ, ಮೊಗಾ ಮೊಂವ್ ಚಾಕ್ತಾನಾ
ಜಿಬೆಕ್ ಕಿತೆಂ ಕಾಮ್?
ಮೋಗ್ ದಾನ್ ಕರ್ತಾನಾ ಹಾತ್ ಉಬಾರ್ನ್ ದಿತಾನಾ
ಹಾತಾಕ್ ಕಿತ್ಯಾಕ್ ಘಾಮ್?
ಮೋಗ್ ಬ್ಹೊಗ್ತಾನಾ, ಮೊಗಾಭಾಸ್ ಶಿಕ್ತಾನಾ,
ಕಾಲ್ಜಾಂತ್ ಕಿತ್ಯಾಕ್ ಘುಸ್ಪೋದ್-ಗರಮ್?
ಶಾಬಿತ್ ಆಸ್ತೊಲೋಯ್ ಜಿನ್ಯೆಂತ್  ತುಜ್ಯಾ  ಮೋಗ್ ವಸ್ತಾನಾ,
ಮೊಗಾ ತುಕಾ ಸಲಾಮ್.            
  Vinco., Fathimapur

Tuesday 27 October 2009

ಕೊನೆಯ ಭೇಟಿ



ಅದು ನಮ್ಮ ಕೊನೆಯ ಭೇಟಿಯೆಂದು
ಮೊದಲೇ ನನಗೆ ತಿಳಿದಿದ್ದರೆ,
ಕಣ್ತುಂಬ ನಿನ್ನ ತುಂಬಿಕೊಂಡು
ನಿನ್ನ ಕಣ್ಣ ಕನ್ನಡಿಯಲ್ಲಿ
ನನ್ನ ಬಿಂಬವ ಕಾಣುತ್ತಿದ್ದೆ.

ಶಬ್ದಗಳ ಪೋಣಿಸಿ
ನಿನ್ನ ಸೌಂದರ್ಯವ ಬಣ್ಣಿಸುತ್ತಿದ್ದೆ
ಜೊತೆಗೆ ನಿಂತು ಭಾವಚಿತ್ರವ ತೆಗೆದಿಡುತ್ತಿದ್ದೆ.

ಬಿಚ್ಚು ಮನವ ತೋರುತ
ಹೃದಯವನೆನ್ನ ತೆರೆದಿಡುತ್ತಿದ್ದೆ
ಅಪ್ಪಿ ನಿನ್ನ ಮುತ್ತಿನ ಮಳೆಗರೆಯುತ್ತಿದ್ದೆ.

ನಿನ್ನ ಋಣವ ತೀರಿಸಿ
ಮಾಡಿದ ಅಪರಾಧಗಳನ್ನು ಮನ್ನಿಸೆಂದು ಬೇಡುತ್ತಿದ್ದೆ.

ಪ್ರೀತಿ ಕೈದಿ ನಾನೆಂದು ತಿಳಿಸಿ
ಬಿಡುಗಡೆಯ ಕಿಲಿಕೈಯನ್ನು ಬೇಡುತ್ತಿದ್ದೆ.
ಕಂಗಳಲ್ಲಿ ಕಂಬನಿ ತುಂಬಿ
ನಿನ್ನ ನೋಡಲು ನಿರಂತರ ಕಾಯುತಿರುವೆ
ಎಂಬ ಸತ್ಯವ ಹೇಳಿ ಕಳುಹಿಸುತ್ತಿದ್ದೆ.

"ನನ್ನುಸಿರೇ ನಿ ಕೊನೆಯುಸಿರೆಳೆದಿರುವೆ
ಉಸಿರಾಡುವೆನು ನಾನು ನನ್ನ ಕೊನೆಯುಸಿರಿನವರೆಗೆ,
ಕೇವಲ ನಿನಗಾಗಿ ನಿನ್ನುಸಿರಿನ ಸವಿನೆನಪಿಗಾಗಿ.!!!"

Vinco., Fathimaapur.